ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
21-03-2025
ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ?
ಸೌತ್ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಮೀರ್ ಖಾನ್ ನಟನೆಯ ‘ಘಜಿನಿ’ ಚಿತ್ರದ ಸೀಕ್ವೆಲ್ ಬರಲಿದೆಯಾ? ಎಂಬುದಕ್ಕೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ‘ಘಜಿನಿ’ ಪಾರ್ಟ್ 2 ಬರೋದಾಗಿ ಅವರು ತಿಳಿಸಿದ್ದಾರೆ. ಆಮೀರ್ ಖಾನ್ ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್ಗೆ ಇತ್ತೀಚೆಗೆ ಮುರುಗದಾಸ್ ಭೇಟಿ ನೀಡಿರೋದಾಗಿ ತಿಳಿಸಿದ್ದಾರೆ. ಈ ವೇಳೆ, ‘ಘಜಿನಿ 2’Ghajini 2 ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಬಳಿ ಕೆಲವು ಐಡಿಯಾಗಳಿವೆ. ಮತ್ತೊಮ್ಮೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ‘ಘಜಿನಿ 2’ ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ತಿಳಿಸಿದ್ದಾರೆ.
