ವರದಿಗಾರರು :
ದರ್ಶನ್ ಎಂ ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
27-11-2025
ದಾವಣಗೆರೆ: ಜಿಎಂಐಟಿ ವಿದ್ಯಾರ್ಥಿಗಳಿಗೆ ಉದ್ಯೋಗವಾಯ್ಸು – Infosys, SLK ಸೇರಿದಂತೆ ಹಲವಾರು ಕಂಪನಿಗಳಲ್ಲಿ ಆಯ್ಕೆ
ದಾವಣಗೆರೆ, 27 ನವೆಂಬರ್ 2025: ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಜಿಎಂಐಟಿ) ಇತ್ತೀಚೆಗೆ ನಡೆದ ವಿವಿಧ ಕಂಪನಿಗಳ ಕ್ಯಾಂಪಸ್ ಸಂದರ್ಶನಗಳಲ್ಲಿ ಇಂಜಿನಿಯರಿಂಗ್ ವಿಭಾಗದ 70ಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನು ಪಡೆದಿದ್ದಾರೆ ಎಂದು ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ. ತಿಳಿಸಿದ್ದಾರೆ. ವಿಭಾಗವಾರು ಆಯ್ಕೆಗಳು: ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಶನ್ ಸೈನ್ಸ್, ಎಐ & ಎಮ್‌ಎಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್: 13 ವಿದ್ಯಾರ್ಥಿಗಳು Infosys ನಲ್ಲಿ ಆಯ್ಕೆಯಾಗಿದ್ದಾರೆ. SLK ಸಾಫ್ಟ್‌ವೇರ್: 38 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್: ಪಾರಾಸ್ ಇಂಜಿನಿಯರಿಂಗ್ ಲಿಮಿಟೆಡ್. ಬಯೋಟೆಕ್ನಾಲಜಿ: ಓಮೆಗಾ ಹೆಲ್ತ್ ಕೇರ್. ಮೆಕ್ಯಾನಿಕಲ್ ಇಂಜಿನಿಯರಿಂಗ್: ವಿಜಯ್ ಸ್ಪೈರಡಲ್ಸ್ ಮತ್ತು ಜಾನ್ಸನ್ ಲಿಫ್ಟ್ಸ್ & ಎಲಿವೆಟರ್ಸ್. ಇನ್ನಷ್ಟು ಕಂಪನಿಗಳು ಮುಂದಿನ ದಿನಗಳಲ್ಲಿ ನೇಮಕಾತಿ ಮಾಡುವ ನಿರೀಕ್ಷೆಯಿದ್ದು, ಕೆಲವು ಕಂಪನಿಗಳ ಸಂದರ್ಶನ ಫಲಿತಾಂಶ ಇನ್ನೂ ಬರುವಂತಿದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 400ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ತರಬೇತಿ ಮತ್ತು ಮಾರ್ಗದರ್ಶನ: ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರು ಅಕ್ಷರ ಪಿ ಮತ್ತು ವಿಲಾಸ್ ವಾಟ್ವೆ ಹಾಗೂ ಸಹಾಯಕರು ಆಕಾಶ್ ಗೌಡ, ಸುನಿಲ್ ಕುಮಾರ್ ಎಂ.ಸಿ., ಅವಿನಾಶ್ ಅಶ್ವಿಕ್ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಪ್ರಸ್ತುತ ಆರ್ಥಿಕ ಹಿಂಜರಿತದ ಸಮಯದಲ್ಲಿಯೂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಮಹತ್ವಪೂರ್ಣ ಯಶಸ್ಸು ಕಂಡಿದ್ದಾರೆ ಎಂದು ಹೇಳಿದ್ದಾರೆ. ಅಭಿನಂದನೆ: ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಎಂಐಟಿ ಕುಲಾಧಿಪತಿಗಳು ಶ್ರೀ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿಗಳು ಶ್ರೀ ವೈ.ಯು. ಸುಭಾಷ್ಚಂದ್ರ, ಕುಲಪತಿಗಳು ಡಾ. ಎಸ್.ಆರ್. ಶಂಕಪಾಲ್, ಉಪ ಕುಲಪತಿಗಳು ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ.ಸುನಿಲ್ ಕುಮಾರ್ ಬಿ.ಎಸ್. ಹಾಗೂ ವಿವಿಧ ವಿಭಾಗದ ಮುಖ್ಯಸ್ಥರುಗಳು ಅಭಿನಂದಿಸಿದ್ದಾರೆ.
