ವರದಿಗಾರರು :
ಡಾ.ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
09-09-2025
“ ಶ್ರೀಲಂಕಾದಲ್ಲಿ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ”
ಶ್ರೀಲಂಕಾದಲ್ಲಿ ನಡೆಯುವ ಪ್ಯಾರಾ ಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆಯಾದ ದಿವ್ಯಾಂಗ್ ಸ್ಪೋರ್ಟ್ಸ್. ತುಮಕೂರು ಜಿಲ್ಲೆಯ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿಯಿಂದ ಐದು ವರ್ಷದಿಂದ ನಿರಂತರವಾದ ಕ್ರೀಡೆಗಳನ್ನು ತುಮಕೂರು ಮಹಾತ್ಮ ಗಾಂಧಿ ಸ್ಟೇಡಿಯಂ ಮತ್ತು ಜೂನಿಯರ್ ಕಾಲೇಜು ಮೈದಾನದಲ್ಲಿ ಅಭ್ಯಾಸ ಮಾಡಿ, ರಾಷ್ಟ್ರೀಯ ತಂಡದಲ್ಲಿ ಅತ್ಯುತ್ತಮ ಆಟ ಆಡುವ ಮೂಲಕ ಇಂದು ಅಂತರಾಷ್ಟ್ರಿಯ ಮಟ್ಟಕ್ಕೆ ತುಮಕೂರು ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿಯ ನಾಲ್ಕು ಜನ ಶ್ರೀಲಂಕಾದಲ್ಲಿ ನಡೆಯುವ ಪ್ಯಾರಾ ಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗಿದ್ದಾರೆ .
ಈ ನಾಲ್ಕು ಜನ ಹುಟ್ಟು ವಿಶೇಷ ಚೇತನರಾಗಿದ್ದು ,ಏನಾದರೂ ಸಾಧನೆ ಮಾಡುವ ಹಂಬಲದಿಂದ ಕ್ರೀಡೆಗಳನ್ನು ಅಭ್ಯಾಸ ಮಾಡುವ ಮೂಲಕ ಇಂದು ಭಾರತ ತಂಡಕ್ಕೆ ಆಯ್ಕೆ ಆಗಿ ರಾಜ್ಯಕ್ಕೆ ಮತ್ತು ಜಿಲ್ಲೆಯ ಮಾದರಿಯಾಗಿದ್ದಾರೆ ಎಂದು ತುಮಕೂರು ಜಿಲ್ಲೆ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ಯ ಸಂಸ್ಥಾಪಕರಾದ ಪ್ರಕಾಶ, ತುಮಕೂರು ಜಿಲ್ಲೆ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ಯ ಸಂಸ್ಥಾಪಕರುತಿಳಿಸಿದ್ದಾರೆ.
