
ಲೈವ್ ಟಿವಿ ನ್ಯೂಸ್

ದಿನಾಂಕ : 25-03-2025
ನಟ ಸೋನು ಸೂದ್ ಪತ್ನಿ ಕಾರು ಅಪಘಾತ!
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 17251+
ಮುಂಬೈ: ನಟ ಸೋನು ಸೂದ್ ಪತ್ನಿ ಸೊನಾಲಿ ಸೂದ್ ಮತ್ತು ನಾದಿನಿ ಸುನಿತಾ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ನಾಗುರದ ವಾರ್ಧಾ ರಸ್ತೆಯ ಪ್ರೈಓವರ್ ಬಳಿ ಕಾರಿಗೆ ಟ್ರಕ್ ಬಂದು ಗುದ್ದಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ಸೋಮವಾರ ರಾತ್ರಿ 10.30ರ ಹೊತ್ತಿಗೆ ಘಟನೆ ನಡೆದಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ನಾಗುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಪತ್ನಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಸೋನು ಸೂದ್, 'ಸೊನಾಲಿ ಆರೋಗ್ಯ ಸ್ಥಿರವಾಗಿದೆ. ಪವಾಡದಂತೆ ಅವರು ಅಪಾಯದಿಂದ ಪಾರಾಗಿದ್ದಾರೆ' ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















