
ಲೈವ್ ಟಿವಿ ನ್ಯೂಸ್

ದಿನಾಂಕ : 15-04-2025
ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟಿ ವೈಷ್ಣವಿ ಗೌಡ !
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 7304+
ಅಗ್ನಿಸಾಕ್ಷಿ, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗ್ರ್ಯಾಂಡ್ ಆಗಿ ನಟಿ ನಿಶ್ಚಿತಾರ್ಥ ಮಾಡಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ.
ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ಮದುವೆಯಾಗುತ್ತಿರೋ ವರ ಅನುಕೂಲ್ ಮಿಶ್ರಾ ಅವರು ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ಮೆಚ್ಚಿದ ವರನೊಂದಿಗೆ ಖುಷಿಯಿಂದ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ.
ಸದ್ಯ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಅವರು, ಅವನದ್ದು ಆಕಾಶ ಸೇವೆ, ನನ್ನದು ಸ್ಕ್ರೀಪ್ಟ್ ಹಾಗೂ ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ ಎಂದು ಬರೆದುಕೊಂಡಿದ್ದಾರೆ.
ಬೆಳಗ್ಗೆ ನಡೆದ ಶಾಸ್ತ್ರದಲ್ಲಿ ಕ್ರೀಮ್ ಕಲರ್ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಸಂಜೆ ನಡೆದ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ವೈಷ್ಣವಿ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಡ್ರೆಸ್ ಧರಿಸಿದ್ದಾರೆ.
ನಟಿಯ ನಿಶ್ಚಿತಾರ್ಥ ಸಂಭ್ರಮಕ್ಕೆ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ, ಚೈತ್ರಾ ವಾಸುದೇವನ್, ಪೂಜಾ ಲೋಕೇಶ್ ಸೇರಿದಂತೆ ‘ಸೀತಾ ರಾಮ’ ಸೀರಿಯಲ್ ತಂಡ ಕೂಡ ಭಾಗಿಯಾಗಿತ್ತು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















