ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
29-10-2025
ತಾಯ್ತನದ ಬಗ್ಗೆ ಅಚ್ಚರಿಯ ವಿಚಾರ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಖ್ಯಾತ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳ ನಡುವೆ ತಮ್ಮ ತಾಯಿತನದ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಕುಟುಂಬ ವಿಶ್ರಾಂತಿ ಮತ್ತು ಫಿಟ್ನೆಸ್ ಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಭವಿಷ್ಯದ ಮಕ್ಕಳ ಬಗ್ಗೆ ಮಾತನಾಡಿರುವ ಅವರು ತಾಯಿಯಾಗುವ ಭಾವನೆ ತಮಗಿದ್ದು ಅವರಿಗಾಗಿ ಏನನ್ನಾದರು ಮಾಡಲು ಸಿದ್ಧ ಎಂದಿದ್ದಾರೆ,ಅತಿಯಾದ ಕೆಲಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ತಮ್ಮ ಮಿತಿಗಳನ್ನು ತಿಳಿದುಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.
