ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
02-12-2025
ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ
ಸೋಮವಾರ ಬೆಳಗಿನ ಜಾವ, ಹಿಮ ಮತ್ತು ಮಂಜು ಮುಸುಕಿದ ರಸ್ತೆಯಲ್ಲಿ ಕಾರು ಪಲ್ಟಿ ಹೊಡೆದ ಘಟನೆ ಪ್ರಕರಣವಾಗಿ ಮಧುಗಿರಿಯಲ್ಲಿ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಮಧುಗಿರಿ–ಪಾವಗಡ ರಸ್ತೆಯ ಜಡೆಗೊಂಡನಹಳ್ಳಿ ಗ್ರಾಮದ ಬ್ರಿಡ್ಜ್ ಸಮೀಪದಲ್ಲಿ ನಡೆದಿದೆ. ಪಲ್ಟಿ ಹೊಡೆದ ಕಾರಿನಲ್ಲಿ ಮಡಕಶಿರಾ ತಾಲೂಕಿನ ಗುಡ್ಡಂಪಲ್ಲಿ ಗ್ರಾಮದ ಕೃಷ್ಣ ರೆಡ್ಡಿ (45) ಮತ್ತು ಅವರ ಪತ್ನಿ ಜ್ಯೋತಿ ಲಕ್ಷ್ಮೀ ಪ್ರಯಾಣಿಸುತ್ತಿದ್ದರು. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ತುರ್ತು ಸಿಬ್ಬಂದಿ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
