ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
17-12-2025
ವಿಜಿ ಬಿ ರಾಮ್ ಜಿ ವಿಧೇಯಕ ಮಂಡನೆ
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಿಬಿ ಜಿ ರಾಮ್ ಜಿ ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಯಿತು.
ಈ ಯೋಜನೆ ಮೊದಲು ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾಗಿತ್ತು. ಈಗ ಅದರ ಹೆಸರನ್ನು ಬದಲಿಸಿ ವಿಕಸಿತ ಭಾರತ ಯೋಜನೆ ಎಂದು ನಾಮಕರಣ ಮಾಡಲಾಗಿದೆ.
ವಿಬಿ ಜಿ ರಾಮ್ ಜಿ ಅಂದರೆ ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಮತ್ತು ಅಜಿವೀಕಾ ಮಿಷನ್ ಎಂಬುದಾಗಿದೆ.
ಕೇಂದ್ರದಲ್ಲಿ ಪ್ರತಿಪಕ್ಷಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯಗಳಿಗೆ ಶೇ 40 ರಷ್ಟು ಹೊರೆ ಹೊರಿಸಿರುವುದು ,ಮಹತ್ಮಾಗಾಂಧಿ ಹೆಸರನ್ನು ಕೈಬಿಟ್ಟಿರುವುದು ಸೇರಿದಂತೆ ಹಲವು ಸಂಗತಿಗಳನ್ನು ವಿರೋಧಿಸಿದರು.
ಈ ಜಟಾಪಟಿಗಳ ಮಧ್ಯೆ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚಹ್ಹಾನ್ ವಿಧೇಯಕವನ್ನು ಮಂಡಿಸಿದರು.
ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗದ ಯೋಜನೆಯನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಿ ಹೊಸ ವಿಧೇಯಕವನ್ನು ಮಂಡಿಸಲಾಗಿದೆ.
