ವರದಿಗಾರರು :
ಸುನಿತಾ ಹಿರೇಮಠ, ||
ಸ್ಥಳ :
ಕುಷ್ಟಗಿ
ವರದಿ ದಿನಾಂಕ :
01-12-2025
ಪೂಜ್ಯಶ್ರೀ ಬಾಲಚಂದ್ರಪ್ಪರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ
ಹೊಸೂರು, 30-11-2025: ಏಷ್ಯಾ ಅಂತರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ, ಹೊಸೂರು (LAO-USA) ವತಿಯಿಂದ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರದ ಶ್ರೀ ಶಿವಯೋಗಿ ಶಂಕರಲಿಂಗ ಮಠದ ಧರ್ಮಾಧಿಕಾರಿ ಪೂಜ್ಯಶ್ರೀ ಬಾಲಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಲೆ ಮಾದೇಶ್ವರ ಪೂಜ್ಯರ ಸಾನಿಧ್ಯವಿತ್ತು. ಪೂಜ್ಯಶ್ರೀ ಬಾಲಚಂದ್ರಪ್ಪರು ಶ್ರೀಮಠದಲ್ಲಿ ನಿರಂತರವಾಗಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು, ಈ ಗೌರವವು ಅವರ ಸೇವೆಗೆ ಒಬ್ಬ ಸ್ಮರಣೀಯ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.
ಶ್ರೀಮಠದಲ್ಲಿ ವರ್ಷಂಪ್ರತಿ ನಡೆಯುವ ಶ್ರೀಶಂಕರಲಿಂಗ ಜಾತ್ರೆ ಹಿನ್ನಲೆಯಲ್ಲಿ, 11 ದಿನಗಳ ವಿಶೇಷ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಪಾಠ, ಕಲಾವಿದರ ಸನ್ಮಾನ, ಗ್ರಾಮೀಣ ಕ್ರೀಡಾಕೂಟ, ಬಾಲಕರ ಪಾದಪೂಜೆ, ಪರಿಸರ ಜಾಗೃತಿ ಕಾರ್ಯಕ್ರಮ, ನಿತ್ಯ ಅನ್ನದಾಸೋಹ ಸೇರಿದಂತೆ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಈ ಗೌರವ ಪ್ರಶಸ್ತಿಯ ಪ್ರದಾನವು ಸರ್ವ ಧರ್ಮ ಭಕ್ತರಿಗೆ ಸಂತಸದ ಕ್ಷಣ ನೀಡಿದ್ದು, ಭಾವೈಕ್ಯತೆಯ ಶ್ರೀಮಠದಲ್ಲಿ ಧಾರ್ಮಿಕ-ಸಾಮಾಜಿಕ ಜನಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ವಿಸ್ತಾರಗೊಳ್ಳಲಿ ಎಂಬ ಆಶಯ ವ್ಯಕ್ತವಾಗಿದೆ. ಶ್ರೀ ಶಿವಯೋಗಿ ಶಂಕರಲಿಂಗ ಮಠದ ಭಕ್ತರು ಪೂಜ್ಯಶ್ರೀ ಬಾಲಚಂದ್ರಪ್ಪರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
