ಲೈವ್ ಟಿವಿ ನ್ಯೂಸ್

ದಿನಾಂಕ : 10-04-2025

ಗುರುತೇ ಸಿಗದಷ್ಟು ಸಣ್ಣ ಆದ ಕಪಿಲ್ ಶರ್ಮಾ ಕಂಡು ಅಭಿಮಾನಿಗಳು ಶಾಕ್ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 9507+

ಬಾಲಿವುಡ್ ನಟ ಕಮ್ ನಿರೂಪಕ ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ 3ನೇ ಸೀಸನ್‌ಗೆ ತಯಾರಿ ನಡೆಯುತ್ತಿದ್ದಾರೆ. ಈ ನಡುವೆ ಅವರು ಗುರುತೇ ಸಿಗದಷ್ಟು ಸಣ್ಣ ಆಗಿದ್ದಾರೆ. ನಟನ ಲುಕ್ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ನಿಮಗೆ ಹುಷರಿಲ್ವಾ ಎಂದು ಫ್ಯಾನ್ಸ್ ಕೇಳಿದ್ದಾರೆ.

ನಿನ್ನೆ (ಏ.9) ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕಪಿಲ್ ಅವರು ಬಿಳಿ ಬಣ್ಣದ ಉಡುಗೆ ಧರಿಸಿದ್ದರು. ತುಂಬಾ ತೂಕ ಇಳಿಸಿಕೊಂಡು ತೆಳ್ಳಗೆ ಕಾಣುತ್ತಿದ್ದರು. ಸದಾ ಫಿಟ್‌ನೆಸ್‌ಗೆ ಹೆಚ್ಚು ಗಮನ ಕೊಡುತ್ತಿದ್ದ ಕಪಿಲ್ ಹೀಗೆ ಸಣ್ಣ ಆಗಿರೋದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟನ ಆರೋಗ್ಯದ ಬಗ್ಗೆ ಫ್ಯಾನ್ಸ್ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ನಟನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಅಂದಹಾಗೆ, ‘ಕಿಸ್ ಕಿಸ್ಕೋ ಪ್ಯಾರ್ ಕರೋನ್ 2’ ಸಿನಿಮಾದಲ್ಲಿ ಕಪಿಲ್ ನಾಯಕನಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand