ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
18-12-2025
ಭಾರತದಾದ್ಯಂತ ಭಾರತ್ ಟ್ಯಾಕ್ಸಿ ಸೇವೆ..
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯಾದ ಭಾರತ್ ಟ್ಯಾಕ್ಸಿ ಸೇವೆ ಜನವರಿ ಒಂದರಂದು ದೆಹಲಿಯಲ್ಲಿ ಮೊದಲ ಸಹಕಾರ ವ್ಯವಸ್ಥೆಯ ಸೇವೆ ಆರಂಭಿಸಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಇಪ್ಪತ್ತು ನಗರಗಳಲ್ಲಿ ಸೇವೆ ಆರಂಭಿಸಲಿರುವ ಭಾರತ್ ಟ್ಯಾಕಿಗೆ ಕೇಂದ್ರ ಯೋಜನೆ ರೂಪಿಸುತ್ತಿದೆ.
ಏನಿದು ಭಾರತ್ ಟ್ಯಾಕ್ಸಿ ಸೇವೆ??
ಈಗಾಗಲೇ ಪ್ರಚಲಿತದಲ್ಲಿರುವ ಓಲಾ, ಉಬರ್ ಮತ್ತು ರಾಪಿಡೋ ಸೇವೆಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಭಾರತ್ ಟ್ಯಾಕ್ಸಿ ಸೇವೆಯನ್ನ ಪರಿಚಯಿಸುತ್ತಿದೆ.
ಭಾರತ್ ಟ್ಯಾಕ್ಸಿ ಸೇವೆಯಿಂದ ಆಗುವ ಪ್ರಯೋಜನಗಳೇನು??
ಭಾರತ್ ಟ್ಯಾಕ್ಸಿ ಸೇವೆಯಿಂದ ಚಾಲಕರಿಗೆ ಶೇ 80 ರಷ್ಟು ಬಾಡಿಗೆ ಹಣ ಪಾವತಿಯಾಗುತ್ತದೆ. ಇದಕ್ಕೆ ಕಾರಣ ಸರ್ಜ್ ಪ್ರೈಸಿಂಗ್ ಇರುವುದಿಲ್ಲ.
ಮೊಬೈಲ್ ಅಂಡ್ರಾಯ್ಡ್ ಐಓಎಸ್ ಆಪ್ಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆ ಲಭ್ಯವಿರಲಿದೆ.
ಇದರಿಂದ ಭಾರತ್ ಟ್ಯಾಕ್ಸಿ ಸೇವೆ ಸಲ್ಲಿಸುವ ಚಾಲಕರಿಗೆ ಲಾಭದ ಅಂಶ ಹೆಚ್ಚಾಗಿರುತ್ತದೆ. ಈ ಸೇವೆಯು ಕೇಂದ್ರ ಸಚಿವ ಅಮಿತ್ ಶಾ ಅವರ ಹಣಕಾಸು ಸಚಿವಾಲದ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.
