
ಲೈವ್ ಟಿವಿ ನ್ಯೂಸ್

ದಿನಾಂಕ : 03-04-2025
ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ !
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 13049+
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅನಿಮಲ್, ಪುಷ್ಪ 2, ಛಾವಾ ಈ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಇದರ ನಡುವೆ ನಟಿಯ ಬರ್ತ್‌ಡೇ ಆಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹುಟ್ಟುಹಬ್ಬದ ಬಗ್ಗೆ ಉತ್ಸುಕರಾಗಿರೋ ನಟಿ, ಇದೀಗ ನನಗೆ 29 ವರ್ಷ ಆಗ್ತಿದೆ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನನ್ನ ಹುಟ್ಟುಹಬ್ಬದ ತಿಂಗಳು ಬಂದಿದೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್‌ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ.
ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದನ್ನು ಆಚರಿಸುವ ಸಮಯ ಎಂದು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ನಟಿಗೆ ಬರ್ತ್‌ಡೇ ವಿಶ್ಸ್ ತಿಳಿಸಲು ಪ್ರಾರಂಭಿಸಿದ್ದಾರೆ.
ಅಂದಹಾಗೆ, ಇದೇ ಏ.5ರಂದು ರಶ್ಮಿಕಾ ಮಂದಣ್ಣ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಈಗಿನಿಂದಲೇ ಅಭಿಮಾನಿಗಳ ಕಡೆಯಿಂದ ನಟಿಯ ಬರ್ತ್‌ಡೇ ಸೆಲೆಬ್ರೇಶನ್‌ಗೆ ಜೋರಾಗಿ ತಯಾರಿ ನಡೆಯುತ್ತಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















